ಸಂಕ್ರಾಂತಿ ಕಾವ್ಯ ಸುಗ್ಗಿ ಸಂ-ಕ್ರಾಂತಿ! ಚೈತ್ರ ಶಿವಯೋಗಿಮಠ ಆಂತರ್ಯದಲ್ಲಿ ಭುಗಿಲೆದ್ದಿದ್ದರೂಅಸಮಾಧಾನ, ಅಶಾಂತಿಶಮನ ಮಾಡಲಿ ಅದೆಲ್ಲವಎಳ್ಳು-ಬೆಲ್ಲ ತಿನ್ನಿಸುವ ಸಂಕ್ರಾಂತಿ! ಮನದೊಳಗೆ ನಡೆದಿದ್ದರೂಭಾವನೆಗಳ ಸಂಘರ್ಷ-ಕ್ರಾಂತಿರಮಿಸಿ ತುಂಬಲಿ ಸಿಹಿ ಹರುಷವಕಬ್ಬಿನ ಜಲ್ಲೆಯ ಸಂಕ್ರಾಂತಿ! ಒಲವು ಮರೆತು, ಒಳಗೆತುಂಬಿದ್ದರೂ ಸಿರಿತನದ ಭ್ರಾಂತಿ..ಮರೆಸಿ ಭ್ರಮೆಯ, ತೆರೆಸಲಿ ಒಳಗಣ್ಣಅವರೆ, ನೆಲಗಡಲೆ ಬಿಡಿಸುವ ಸಂಕ್ರಾಂತಿ! ಮನವು ಮುದುಡಿ, ಭಾವ ಕದಡಿಹಾರಿ ಹೋಗಿದ್ದರೂ ಮನದ ಜಂತಿಅರಳಿಸಿ ಮನವ, ತುಂಬಲಿ ಸ್ಥೈರ್ಯವಬಣ್ಣದ ರಂಗವಲ್ಲಿ ಬಿಡಿಸುವ ಸಂಕ್ರಾಂತಿ!! ವರುಷವಿಡಿ ಸುಖ-ದುಃಖಗಳ ಸ್ವೀಕರಿಸಿಕೆಲವೊಮ್ಮೆ ಸಂಭ್ರಮಿಸಿ, ಮತ್ತೊಮ್ಮೆ ಕನವರಿಸಿದಣಿದು ನಲುಗಿರುವ, ಮನವೆಂಬರಾಸನ್ನ ಸಿಂಗರಿಸಿ ಬೆಂಕಿಹಾಯಿಸುವ … Continue reading